ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಕ್ಲಸ್ಟರ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂಗನಹಳ್ಳಿ. ಶಾಲೆಯಲ್ಲಿ ವಿನೂತನವಾದ ಶಾಲಾ ದಾಖಲಾತಿ ಆಂದೋಲನ ಜೊತೆಗೆ ಜೂನ ಒಂದರಂದು ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕರ ಶಿಕ್ಷಕರ ಸಭೆ ಜರುಗಿತು ,
ಮುಖ್ಯ ಅತಿಥಿಗಳಾಗಿ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಗಾಯತ್ರಿ ದೇವಿ ಸಜ್ಜನ ವಲಯ ಅರಣ್ಯ ಅಧಿಕಾರಿಗಳು ಆದ ಅರುಣ ಕುಮಾರ ಅಷ್ಟಗಿ , ಕ್ಷೇತ್ರ ಸಮನ್ವಯ ಅಧಿಕಾರಿ ಪಾಂಡುರಂಗ ಪೂಜಾರ, ಸಿ ಆರ್ ಪಿ ಶರೀಪ್ ಹರಿಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಗೆ ಆಗಮಿಸುವ ಮಕ್ಕಳಿಗೆ ಪುಷ್ಪರ್ಚನೆ ಮಾಡಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು, ಶಾಲಾ ಆಡಳಿತ ಮಂಡಳಿ ಹಾಗೂ ಹಿರಿಯರು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಲಯ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸರಸ್ವತಿ ಪೂಜೆ ಸಲ್ಲಿಸಿ ಸಸಿ ನೀರುಣಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ವಲಯ ಅರಣ್ಯ ಅಧಿಕಾರಿ ಅರುಣ ಕುಮಾರ ಅಷ್ಟಗಿ ಮಾತನಾಡಿ ಶಿಕ್ಷಣದಿಂದ ಭವಿಷ್ಯ ನಿರ್ಮಾಣ ಉತ್ತಮವಾದ ಶಿಕ್ಷಣ ಪಡೆದ ವ್ಯಕ್ತಿ ಸಮಾಜದಲ್ಲಿ ಉತ್ತಮವಾದ ಪ್ರಜೆ ಆಗಬಲ್ಲ ಎಂದು ಮಾರ್ಗದರ್ಶನ ಮಾಡಿದರು.. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಾಯತ್ರಿ ದೇವಿ ಸಜ್ಜನ ಮಾತನಾಡಿ ಉತ್ತಮವಾದ ಕಲಿಕೆ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ದ್ವಿಭಾಷಾ ಶಿಕ್ಷಣದಿಂದ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾಧ್ಯಮ ದಲ್ಲಿ ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಶಿಕ್ಷಣ ದೊರಕುತ್ತದೆ. ಸರ್ಕಾರದ ಹಲವು ವಿವಿಧ ಯೋಜನೆಗಳ ಬಗ್ಗೆ ಪಾಲಕರಿಗೆ ತಿಳಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತೆ ಸಲಹೆ ನೀಡಿದರು. ಮಕ್ಕಳನ್ನು ಪಾಲಕರ ಜೊತೆಗೆ ಕುಳಿತುಕೊಂಡು ಗುರುಕುಲ ಪದ್ಧತಿಯಂತೆ ಓಂಕಾರ ಬರೆಯುವ ಮೂಲಕ ಅಕ್ಷರ ಅಭ್ಯಾಸಕ್ಕೆ ಚಾಲನೆ ನೀಡಿದರು. ಅಧಿಕಾರಿಗಳು ಮಕ್ಕಳಿಗೆ ಉಚಿತವಾಗಿ ಸಸಿಗಳನ್ನು ನೀಡುವ ಮೂಲಕ ಮಕ್ಕಳಿಂದಲೇ ಶಾಲಾ ಆವರಣದಲ್ಲಿ ಸಸಿ ನೆಡಿಸಿ ನೀರುಣಿಸಿದರು. ಶಿಂಗನಹಳ್ಳಿ ಗ್ರಾಮದ ಡಾ. BR ಅಂಬೇಡ್ಕರ್ ಸೇವಾ ಸಮಿತಿಯವರು ಮಕ್ಕಳಿಗೆ ಉಚಿತವಾಗಿ ನೋಟ ಬುಕ್ ಮತ್ತು ಪೆನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು..
ಶಾಲೆಯ sdmc ಅಧ್ಯಕ್ಷರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನಿಂಗಪ್ಪ ಬೈಚವಾಡ, ಶಾಲಾ ಉಪಾಧ್ಯಕ್ಷರು ಶ್ರೀಮತಿ ಜ್ಯೋತಿ ಕಿಳ್ಳಿಕೇತರ, ತುಳಸಾ ಕೊಪ್ಪದ, ಸವಿತಾ ಪಾಟೀಲ್, ಮಾಲಾ ಡಾಬಾಲೆಕರ, ಪಾಂಡುರಂಗ ಬೇಪಾರಿ, ಪರಶುರಾಮ್ ಕಿಳ್ಳಿಕೇತರ, ರಾಮು ಹವಲಗುಂಡಿ ಗ್ರಾಮದ ಹಿರಿಯರು ಸಂಗಪ್ಪ ಅವಧಿ, ಮಂಜುನಾಥ್, ಮಕ್ಕಳ ಪಾಲಕ ಪೋಷಕರು ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಾಲಾ ಪ್ರಭಾರ್ ಮುಖ್ಯ ಗುರುಗಳು ಚಂದ್ರಶೇಖರ ಮಲ್ಲಾಬರಿ ಅವರು ಪ್ರಾಸ್ತಾವಿಕವಾಗಿ ಮಾಡಿದರು. ಶ್ರೀಕಾಂತ್ ಧರಗಾದ ಶಿಕ್ಷಕರು ನಿರೂಪಿಸಿದರು, ಶ್ರೀಮತಿ ನವೀನಾ ಸುಂಕದ ಶಿಕ್ಷಕಿಯರು ಸ್ವಾಗತಿಸಿದರು, ರಾಜಶೇಖರ್ ಅವಧಿ ಅವರು ವಂದನಾರ್ಪಣೆ ಗೈದರು
ಒಟ್ಟಿನಲ್ಲಿ ಚಿಕ್ಕ ಹಳ್ಳಿಯಾದರೂ ಉತ್ತಮವಾದ ಕಾರ್ಯಕ್ರಮ ರೂಪಿಸಿ ಉತ್ತಮವಾದ ಶಾಲಾ ವಾತಾವರಣ ಉತ್ತಮ ಕಲಿಕೆಗೆ ಪ್ರೋತ್ಸಾಹ ನೀಡಿದರು







