ವಿಶೇಷ ಸಮಗ್ರ ಪರಿಸ್ಕರಣೆ 2026 ಕಾರ್ಯಕ್ರಮ
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಸಹಾಯಕ ಚುನಾವಣಾ ಅಧಿಕಾರಿ ಮೊಹಮ್ಮದ್ ಖಜರ್ ಮುಂಬರುವ ಮತದಾರರಿಗೆ ಗಣತಿ ನಮೂನೆ ಫಾರ್ಮ್ ವಿತರಿಸುವ ಮೂಲಕ ಚಾಲನೆ ನೀಡಿದರು, ತಹಸಿಲ್ದಾರ ಬಸವರಾಜ ಹೊಂಕಣದವರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಸಜ್ಜನ, ಮುಖ್ಯಾಧಿಕಾರಿ ಚಂದ್ರಶೇಖರ ಬಿ ,ತಾಲೂಕ ಪಂಚಾಯತಿಯ ಎಂ ಎನ್ ಆರ ಇ ಜಿ ಸಹಾಯಕ ನಿರ್ದೇಶಕ ಗಿರೀಶ, ಸಂತೋಷ್ ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಪೂಜಾರ, ಸಿಎಓ ವಿ ಜಿ ಅಂಗಡಿ, ಕಂದಾಯ ನಿರೀಕ್ಷಕಿ ಶಿವಲೀಲಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣಪ್ಪ ಉಣಕಲ್ಲ ಸಭಿಕರನ್ನು ಸ್ವಾಗತಿಸಿ ಎಸ್ಐಆರ್ ಕುರಿತು ಮಾಹಿತಿ ನೀಡಿದರು, ಪೊಲೀಸ ಇಲಾಖೆಯ ಸಿಬ್ಬಂದಿ ವರ್ಗ, ಕಲಘಟಗಿ ತಾಲೂಕಿನ ಸರ್ವ ಮಾಧ್ಯಮ ಪ್ರತಿನಿಧಿಗಳು ,ಜಿ ಇ ಕಾಲೇಜಿನ ಪ್ರಾಚಾರ್ಯೆ ಶಾರದಾ ಹಾದಿಮನಿ, ಉಪನ್ಯಾಸಕರಾದ ಪ್ರೊ ಬೂದನೂರು, ಶಾಂತಮೇರಿ, ಶೃತಿ ಮೇಟಿ, ರೇಣುಕಾ ಬಳಿಗೇರ, ಸರೋಜಿನಿ ಮುಗಳಕೋಡ, ಲೀಲಾವತಿ ಬೇರೂಡಗಿ, ಎರಡು ನೂರಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಟ್ಟಣ ಪಂಚಾಯತ ಸರ್ವ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು,
ರೂಟ್ -1ರಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಅಲಿ ಜೋರಂ, ಎನ್ ಬಿ ಪಾಟೀಲ, ಶರಣಪ್ಪ ಉಣಕಲ್ಲ, ಜಗದೀಶ ಬೆಂಡೆ, ಪ್ರಿಯಾಂಕ ಕುರ್ಡಕೇರಿ, ಅಶೋಕ ಕಂಟೆಪ್ಪನವರ ನೇತೃತ್ವದಲ್ಲಿ ಧ್ವನಿವರ್ಧಕದ ಮೂಲಕ ವಾಹನದೊಂದಿಗೆ ಎಸ್ಐಆರ್ ಘೋಷಣೆಗಳನ್ನು ಕೂಗುತ್ತಾ ಜಾಥಾ ಹೊರಟು ಪಟ್ಟಣ ಪಂಚಾಯಿತಿ ಕಚೇರಿಯಿಂದ ಅಪ್ಪಾಬಟ್ ಕ್ರಾಸ್ ಚೌಡಿ ಕ್ರಾಸ್, ಚಿತ್ರಗಾರ ಓಣಿ ಬಡಂಕರ ಓಣಿಯ ಮೂಲಕ ಶ್ರೀ ಗ್ರಾಮದೇವಿ ಗುಡಿಯ ರಸ್ತೆಯ ಮೂಲಕ ಹಳೆ ಕೋರ್ಟ ರಸ್ತೆಯ ಮೂಲಕ ಜಿ ಇ ಕಾಲೇಜ್ ತಲುಪಿತು,
ರೂಟ್ 2 ರಲ್ಲಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ, ವ್ಹಿ ಜಿ ಅಂಗಡಿ, ಸಂತೋಷ ಕಟ್ಟಿಮನಿ, ಗುರುಪಾದ ಸೊಬರ ಇವರ ಇವರ ನೇತೃತ್ವದಲ್ಲಿ ಧ್ವನಿವರ್ಧಕದ ವಾಹನದೊಂದಿಗೆ ಎಸ್ಐಆರ್ ಘೋಷಣೆಗಳನ್ನು ಕೂಗುತ್ತಾ ಜಾಥಾ ಹೊರಟು ಪಟ್ಟಣ ಪಂಚಾಯತ ಕಚೇರಿಯಿಂದ ಹಳಿಯಾಳ ರಸ್ತೆ ಹನುಮಾನ ಸರ್ಕಲ್ ತಾಲೂಕ ಪಂಚಾಯತ ಮುಂದೆ ಹಾದು ನಲಬಂದ ಓಣಿ ಕುಂಬಾರ ಓ ಣಿಯ ಬಸವೇಶ್ವರ ಕಲ್ಯಾಣ ಮಂಟಪದ ಮುಂದೆ ಹಾದು ಮಾರ್ಕೆಟ್ ರೋಡ, ಅಕ್ಕಿ ಓಣಿ, ಚೌತಮನಿ ಕಟ್ಟೆಯ ಮೂಲಕ ಕೆಸಿಸಿ ಬ್ಯಾಂಕ ರೋಡ, ಮಚಗಾಗಾರ ಓಣಿ, ಬಮ್ಮಿಗಟ್ಟಿ ಕ್ರಾಸ, ಹುಬ್ಬಳ್ಳಿ, ಕಾರವಾರ ರಸ್ತೆ ಮೂಲಕ ಪಾಲ್ಕರ್ ಪ್ಲಾಟ ಹಳೆ ಕೋರ್ಟ ರಸ್ತೆಯ ಜಿ ಇ ಕಾಲೇಜ ತಲುಪಿತು
ಭಾಗವಹಿಸಿದ ವಿದ್ಯಾರ್ಥಿಗಳಿಗೂ ಸರ್ವರಿಗೂ ಜಿ ಇ ಕಾಲೇಜಿನಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು,






