ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಜಾನಪದ ಮಹಿಳಾ ಸಂಘದ ವತಿಯಿಂದ ಗುರುವಾರ ಧಾರವಾಡ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಪ್ರಸಕ್ತ ಸಾಲಿನ 2026ರ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವನ್ನು ಸಸಿಗೆ ನೀರೆರೆದು, ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಲಾಯಿತು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಮಾಂತೇಶ ನರೇಗಲ ಮಾತನಾಡಿ ದೇಶಿಯ ವಿವಿಧ ಕಲಾಪ್ರಕಾರದ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ಮುಂದಿನ ತಲೆಮಾರಿಗೆ ಪರಿಚಯಿಸುವುದು ನಾಡಿನ ಕಲಾವಿದರ ಗುರುತರ ಜವಾಬ್ದಾರಿಯಾಗಿದೆ ಎಂದರು, ಜಾನಪದ ವಿದ್ವಾಂಸ ಹಾಗೂ ಸಂಘಟಕ ಎಕ್ಕೇರಪ್ಪ ನಡುವಿನಮನಿ ಮಾತನಾಡಿ ಕಲಾವಿದರು ದುಶ್ಚಟಗಳಿಗೆ ದಾಸರಾಗದೆ, ಹೊಂದಾಣಿಕೆ ಮನೋಭಾವದಿಂದ ,ಪರಸ್ಪರ ವಿವಿಧ ಕಲೆಯ ಅನ್ವೇಷಣೆಯನ್ನು ಮಾಡುವಂತಾಗಲಿ ಎಂದರು, ಉದಯೋನ್ಮುಖ ಪತ್ರಕರ್ತೆ ಐಶ್ವರ್ಯ ಕೌಲಗೇರಿ ಮಾತನಾಡಿ ಕಲಾವಿದರು ಸದಾ ಕ್ರಿಯಾಶೀಲರಾಗಿ ನಾಡಿನ ಭವ್ಯ ಪರಂಪರೆ ಜಾನಪದ ಸಂಸ್ಕೃತಿಯ ಕಾವಲುಗಾರರಾಗಿ ತಮ್ಮ ಕಲೆಯನ್ನು ನಾಡಿನ ಜನರಿಗೆ ಪರಿಚಯಿಸುವಂಥ ಕಾರ್ಯಗಳು ಎಲ್ಲಾ ಭಾಗಗಳಲ್ಲಿ ಆಗಲಿ ,ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಲಾವಿದರ ಬಗ್ಗೆ ಕಾಳಜಿ ವಹಿಸುವಂತಾಗಲಿ ಎಂದರು, ಕಾಸರಗೋಡು ಕನ್ನಡ ಭವನದ ಜಿಲ್ಲಾಧ್ಯಕ್ಷ ಪ್ರಭುಲಿಂಗ ರಂಗಾಪುರ, ಕಲಘಟಗಿ ತಾಲೂಕು ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷ ಸಾತಪ್ಪ ಕುಂಕೂರ, ಕಲಘಟಗಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಸೋಮಲಿಂಗ ಒಡೆಯರ,ಕನ್ನಡ ಜಾನಪದ ಪರಿಷತ್ತಿನ ಕಲಘಟಗಿ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡಪೂಜಾರ, ಪಾರವ್ವ ದೇಶೂರ, ಬಸವ್ವ ಉಳ್ಳಾಗಡ್ಡಿ , ಜೈಬುನಾ ಜಾಫರಬಾಯಿ, ಅನಸವ್ವ ನೆನಕ್ಕಿ, ಈರಪ್ಪ ಎಮ್ಮೆಟ್ಟಿ ಸೇರಿದಂತೆ ಮಹಿಳಾ ಡೊಳ್ಳಿನ ತಂಡದ ಸದಸ್ಯರು ,ನಾಡಿನ ವಿವಿಧ ಪ್ರಕಾರದ ಕಲಾವಿದರು, ಸಾಹಿತಿಗಳು ,ಪತ್ರಕರ್ತರು ,ಕಲಾ ಪ್ರೇಮಿಗಳು ಉಪಸ್ಥಿತರಿದ್ದರು,






