ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ತಹಸೀಲ್ದಾರರ ಕಚೇರಿ ಎದುರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ಕರ್ನಾಟಕ ಉತ್ತರ ಪ್ರಾಂತ ಧಾರವಾಡ ಜಿಲ್ಲಾ ಕಲಘಟಗಿ ಘಟಕದ ವತಿಯಿಂದ ಭಾರತೀಯ ಕಿಸಾನ ಸಂಘದ ಧರಣಿಯು ಎಂಟನೇ ದಿನದಲ್ಲಿ ಮುಂದುವರೆದಿದೆ,
ರೈತ ವರ್ಗದ ಜನರ ಬದುಕು ಸಮಸ್ಯೆಗಳು, ಅಧಿಕಾರಿ ವರ್ಗದವರಿಗೆ ರಾಜಕಾರಣಿಗಳಿಗೆ, ಗೊತ್ತಿಲ್ಲ ,ಗೊತ್ತಿದ್ದರೆ ರೈತರು ಬೆಳೆ ವಿಮೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ , ಎಂದು ಧರಣಿ ನಿರತರು ಅಕ್ರೋಶದಿಂದ ಹೇಳಿದರು,
ತಾಲೂಕಿನಲ್ಲಿ ಫಸಲ್ ಭೀಮಾ ಬೆಳೆ ವಿಮೆ ಯೋಜನೆಯಲ್ಲಿ ಕೋಟ್ಯಾಂತರ ಹಣದ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಎಂಟನೇ ದಿನದ ಧರಣಿಯಲ್ಲಿ ಪ್ರತಿಭಟನಾ ನಿರತರು ತಿಳಿಸಿದರು,
ಭಾರತೀಯ ಕಿಸಾನ್ ಪ್ರಾಂತ್ಯ ಸಂಘದ ತಾಲೂಕ ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಜಿಲ್ಲಾಧ್ಯಕ್ಷ ಗುರುನಾಥಗೌಡ ಬಸನಗೌಡರ, ಉಪಾಧ್ಯಕ್ಷ ರುದ್ರಗೌಡ ಪಾಟೀಲ, ಬಿಜೆಪಿ ಮುಖಂಡ, ಬಸವರಾಜ ಶೆರೆವಾಡ, ಚಂದ್ರಗೌಡ ಪಾಟೀಲ,ಪರಶುರಾಮ ಹುಲಿಹೊಂಡ, ಕಿಸಾನ್ ಸಂಘದ ಶಂಕರಗೌಡ ಪಾಟೀಲ, ಕಿಸಾನ ಸಂಘದ ಉಪಾಧ್ಯಕ್ಷ ಕಲ್ಲಪ್ಪ ಪುಟ್ಟಪ್ಪನವರ, ಸಾವಯವ ಕೃಷಿಕ ಇರನಗೌಡ ಪಾಟೀಲ, ಸಂಗಪ್ಪ ಹೊಸಮನಿ, ರಾಯಪ್ಪ ತಿಪ್ಪಕ್ಕನವರ, ಅರ್ಜುನ ಕಲಕುಂಡಿ, ಈಶ್ವರಪ್ಪ ಬಸನಕೋಪ್ಪ, ಶೇಕನಗೌಡ ಪಾಟೀಲ, ಬಸಯ್ಯ ಪೂಜಾರ, ಬಸಪ್ಪ ಕೌಲಗೇರಿ, ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು,





