“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ”

“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ” ಚಂದ್ರಹಾಸ
ಕಲಘಟಗಿ : ಮರದಿಂದ ಮಳೆ ಮಳೆಯಿಂದ ಬೆಳೆ ನಾವು ಮರಗಿಡಗಳನ್ನು ರಕ್ಷಿಸದೆ ಇದ್ದರೆ ನಮ್ಮ ಬದುಕು ತುಂಬಾ ಜಟೀಲವಾಗುತ್ತದೆ. ಜಾಗತಿಕವಾಗಿ ತಾಪಮಾನ ಏರುತ್ತಿದ್ದು ಬದುಕು ಅಸಹನೀಯವಾಗಿದೆ ಮಕ್ಕಳು ಬೀಜದುಂಡೆ ಮಾಡಿ ಬಯಲು ಪ್ರದೇಶದಲ್ಲಿ ಎಸೆಯುವ ಮೂಲ ಪರಿಸರಕ್ಕೆ ಸಹಕರಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ (ರಿ) ತಾಲೂಕಾ ಯೋಜನಾಧಿಕಾರಿ ಚಂದ್ರಹಾಸ ನಾಯ್ಕ ಶಾಲಾ ಮಕ್ಕಳಿಗೆ ಕರೆ ನೀಡಿದರು.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಬೇಗೂರ ಶಾಲೆಯಲ್ಲಿ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. . ಪ್ರಾಸ್ತಾವಿಕವಾಗಿ ಶಾಲಾ ಶಿಕ್ಷಕ ಶ್ರೀಧರ ಜ್ಞಾನಮೋಟೆ ಇಕೋ ಕ್ಲಬ್ ವತಿಯಿಂದ ವರ್ಷವಿಡಿ ಪರಿಸರ ಸಂಬಂಧಿತ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಜರುಗಿಸುತ್ತಿದ್ದೇವೆ. ಇದು ನಮ್ಮ ಪ್ರಾರಂಭದ ಮೊದಲ ಕಾರ್ಯಕ್ರಮವಾಗಿದೆ ಎಂದರು. ಮಕ್ಕಳಿಗೆ ಪರಿಸರ ಕುರಿತಾದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಎರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಿರಿಯ ಮುಖ್ಯಾಧ್ಯಾಪಕ ವೈ.ಜಿ.ಭಗವತಿ ಮಕ್ಕಳು ಬಾಲ್ಯದಿಂದಲೇ ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು. ನಾವೆಲ್ಲ ಪರಿಸರದ ಕೂಸುಗಳು. ಈ ದಿನ ನೆಟ್ಟ ಸಸಿಗಳು ಬೆಳೆದು ಮರವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ತಾಲೂಕಾ ಕೃಷಿ ಅಧಿಕಾರಿ ಸಂತೋಷ, ಹಿರೆಹೊನ್ನಿಹಳ್ಳಿ ಮೇಲ್ವಿಚಾರಕಿ ನಿರ್ಮಲಾ ಕ್ಯಾಸಣ್ಣವರ, ಮುರಗೆಪ್ಪ ಸಜ್ಜನ, ಶಶಿಕಲಾ, ಸವಿತಾ, ಮಹಾದೇವಿ ಪುಂಡಿ, ಶಿಲ್ಪಾ ಸಂದಿಮನಿ, ಶಾಲಾಸಮಿತಿ ಸದಸ್ಯರು, ಪಾಲಕರು ಪೋಷಕರು ಹಾಜರಿದ್ದರು. ನಂತರದಲ್ಲಿ ಶಾಲಾ ಆವರಣದಲ್ಲಿ ಹಣ್ಣಿನ ಸಸಿಗಳನ್ನು ನೆಡಲಾಯಿತು. ವಿಜಯಲಕ್ಷ್ಮೀ ಮುಂಡಗೋಡ ಕಾರ್ಯಕ್ರಮನಿರೂಪಿಸಿದರು. ದೀಪಾ ಕೊಟಗುಣಸಿ ಸ್ವಾಗತಿಸಿದರು ಚನ್ನವ್ವ ಹರಳಿಕಟ್ಟಿಮಠ ವಂದಿಸಿದರು.

Leave a Reply

Your email address will not be published. Required fields are marked *