ಶ್ರೀ ಸಿದ್ಧಾರೂಢ ಸ್ವಾಮಿ ಜಯಂತೋತ್ಸವ ಸಮಿತಿ ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನ ಆಶ್ರಮ ಶ್ರೀ ಕ್ಷೇತ್ರ ಕಣವಿ ಹೊನ್ನಾಪುರ ಪರಮ ಪೂಜ್ಯ ಡಾ. ಶ್ರೀ ವಿದ್ಯಾನಂದ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಧರ್ಮ ಜಾಗೃತಿ ಮತ್ತು ಲೋಕ ಸುಭಿಕ್ಷೆಗಾಗಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ 190ನೇ ಜಯಂತಿ ಜಾತ್ರಾ ಮಹೋತ್ಸವ ನಿಮಿತ್ತ 20ನೇ ವಾರ್ಷಿಕೋತ್ಸವ ಶ್ರೀ ಸಿದ್ದಾರೂಢ ಸೇವಾ ಟ್ರಸ್ಟ್ ದಶಮಾನೋತ್ಸವ ,ಡಾ ಶ್ರೀ ವಿದ್ಯಾನಂದ ಸ್ವಾಮಿಜಿಯವರ ಸನ್ಯಾಸ ರಜತ ಮಹೋತ್ಸವ ,ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀ ಸಿದ್ಧಾರೂಢ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರ ಧಾರವಾಡ ಶಹರದ ರಂಗಾಯಣದಲ್ಲಿ ಸಸಿಗೆ ನೀರೆರೆ ಯುವ ಮೂಲಕ ಚಾಲನೆ ನೀಡಲಾಯಿತು, ಹುನಗುಂದ ಮಠದ ಶ್ರೀ ವೀರೇಶ್ವರ ಮಹಾಸ್ವಾಮಿಗಳು, ಸುರಶೆಟ್ಟಿಕೊಪ್ಪದ ಶ್ರೀ ಶಿವಲಿಂಗ ಸ್ವಾಮಿಗಳು, ಹುಲ್ಲಂಬಿಯ ಶ್ರೀ ರಾಜೇಶ್ವರ ಸ್ವಾಮಿಗಳು ,ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಶ್ರೀ ಕುಂಟೋಜಿ ಬಸವನ ಗೌಡ,ಮಹಾನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುತ್ತುರಾಜ ಮಾಕಡವಾಲೆ , ಸಂಪಾದಕ ದಾನೇಶ ಬುರುಡಿ, ಪ್ರೊ ಜಯಾನಂದ ಹಟ್ಟಿ, ಸಂಘಟಕ ಎಕ್ಕೆರಪ್ಪ ನಡುವಿನಮನಿ, ಸಾತಪ್ಪ ಕುಂಕೂರ ,ಗುರುರಾಜ ನರಸಾಪುರ, ಪ್ರಭುಲಿಂಗ ರಂಗಾಪುರ,ಕರಬಸಯ್ಯ ತೋಟಯ್ಯನವರ, ಬಸಯ್ಯ ಸಂಗೆ ದೇವರಕೊಪ್ಪ, ನಿಂಗಯ್ಯ ಸುರಗಿಮಠ ,ವಿರೂಪಾಕ್ಷ ಕ್ಷತ್ರಿಯ ,ವಿರೂಪಾಕ್ಷ ಹೆಂಡಿ ,ಕುಮಾರಸ್ವಾಮಿ ಹಿರೇಮಠ ,ಭೀಮಸಿ ಅಕ್ಕಿ , ಪಂಚಯ್ಯ ಮಠಪತಿ, ದಾಕ್ಷಾಯಿಣಿ ಬೆನಕಣ್ಣನವರ, ಮಲ್ಲವ್ವ ಸಂಶಿ, ಮಂಜುನಾಥ ಮುಳಗುಂದ, ವೀರ ಬಸನಗೌಡ ಮರಿಗೌಡ್ರ್, ವಿಷ್ಣು ಸದಾವರ್ತಿ, ಸಾತಪ್ಪ ಮಾಂಗ್ಲಿ, ಮಾದೇವಿ ಶಿರೋಳ ಇದ್ದರು,ರಂಗಭೂಮಿಯ ಕಲಾವಿದ ಸೋಮಲಿಂಗ ಒಡೆಯರ ಅವರಿಂದ ರಂಗ ಸಂಭಾಷಣೆಗಳು, ಶಾಸ್ತ್ರೀಯ ಸಂಗೀತದ ವಿದುಷಿ ಪದ್ಮಾಕ್ಷಿ ಒಡೆಯರ ಅವರ ಶ್ರೀ ಸೋಮಲಿಂಗೇಶ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭಕ್ತಿಗೀತೆಗಳು ಸೇರಿದ್ದ ಜನರ ಮನಸ್ಸನ್ನು ಸೇ ಳೆದವು,ನಾಡಿನ ವಿವಿಧ ಮಹಿಳಾ ತಂಡಗಳಿಂದ ಸಾಂಪ್ರದಾಯಿಕ ಗೀತೆಗಳು, ವಿದ್ಯಾರ್ಥಿನಿಯರಿಂದ ಭರತನಾಟ್ಯ, ಭಕ್ತಿ ಗೀತೆಗಳು ಜರುಗಿದವು. ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆನಕನಹಳ್ಳಿ ಗ್ರಾಮದ ಮಹಾದೇವಪ್ಪ ಕಮ್ಮಾರ,ಶಿಕ್ಷಣ ಕ್ಷೇತ್ರದಲ್ಲಿ ಹಾರೆಹುಲೇಕಲ ಶಿಕ್ಷಕರಾದ ಅಬ್ದುಲ್ ಮೋಸಿನ್ ಇಮಾಮ ಶೇಖ್, ಕಲಘಟಗಿಯ ಶ್ರೀಮತಿ ಮಂಜುಳಾ ಕೊಂ ಮಂಜುನಾಥ ಬಿಸನಳ್ಳಿ ಇವರಿಗೆ ಸಮಾಜ ಸೇವೆ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಸ್ಮರಣಿಕೆ ,ಫಲಪುಷ್ಪ ನೀಡಿ ಸನ್ಮಾನಿಸಲಾಯಿತು,








