ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನವೃಷ ಬೇಂದ್ರ ಮಹಾಸ್ವಾಮಿಗಳ ಹದಿಮೂರನೇ ಜಾತ್ರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ ಮೇ 9ನೇ ತಾರೀಕಿನ ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಓಂ ನಮಃ ಶಿವಾಯ ಜಪ ಯಜ್ಞದೊಂದಿಗೆ ಧ್ವಜಾರೋಹಣ ಹಾಗೂ ಶ್ರೀಗಳ ಮೂರ್ತಿಗೆ ರುದ್ರಾಭಿಷೇಕ , ಪೂಜೆ ಹೋಮ ಹವನ ನಡೆಯಿತು, ರಾತ್ರಿ ಪ್ರವಚನ ಹಾಗೂ ಕಲಘಟಗಿಯ ಶಾಸ್ತ್ರೀಯ ಸಂಗೀತದ ವಿದುಷಿ ಶ್ರೀಮತಿ ಪದ್ಮಾಕ್ಷಿ ಸೋಮಲಿಂಗ ಒಡೆಯರ ಅವರಿಂದ ಹಾಗೂ ಅವರ ಶ್ರೀ ಗುರು ಸೋಮಲಿಂಗೇಶ್ವರ ಸಂಗೀತ ಮಹಾ ವಿದ್ಯಾಲಯದ ಮಕ್ಕಳಿಂದ ಭಕ್ತಿಗೀತೆಗಳ ಕಾರ್ಯಕ್ರಮಗಳು ಸೇರಿದ್ದ ಎಲ್ಲರನ್ನೂ ಭಕ್ತಿಯ ಅಲೆಯಲ್ಲಿ ತೇಲಾಡಿಸಿದವು. ಕಲಘಟಗಿ ರಂಗಭೂಮಿ ಕಲಾವಿದ ಸೋಮಲಿಂಗ ಒಡೆಯರ ಅವರಿಂದ ರಂಗಗೀತೆಗಳು ಮತ್ತು ಸಂಭಾಷಣೆಗಳು,ಹಿರೇಹೊನ್ನಿಹಳ್ಳಿಯ ಮಹಿಳಾ ಡೊಳ್ಳಿನ ತಂಡ ಮತ್ತು ಕುರುವಿನಕೊಪ್ಪ ಭಜನಾ ಮಂಡಳಿಯವರಿಂದ ಕಾರ್ಯಕ್ರಮಗಳು ನಡೆಯಿತು, ಕುಮಾರಿ ನಾಗಲಕ್ಷ್ಮಿ ತಳವಾರ ಅವರಿಂದ ನೃತ್ಯ ಜರುಗಿತು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು,ದೇವರಕೊಂಡದ ಶ್ರೀ ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿ ಗುರುವಿನ ರೂಪ ನೋಡದೆ ಗುರುವಿನ ಅಂತರಂಗ ಸಾಮಾಜಿಕ ಕಾರ್ಯಗಳು ಸಮಾಜದ ಉದ್ದಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಣ್ಣ ಅದರಗುಂಚಿ ಮಾತನಾಡಿ ನಾಡಿನ ತುಂಬೆಲ್ಲ ಸಂಸ್ಕೃತಿ ಪರಂಪರೆ ಉಳಿಸುವ ಕಾರ್ಯಗಳು ಎಲ್ಲ ಭಾಗಗಳಲ್ಲಿ ನಡೆಯುವಂತಾಗಲಿ ಇದಕ್ಕೆ ಜನಪ್ರತಿನಿಧಿಗಳು , ಜನರು ಹಾಗೂ ,ಭಕ್ತರ ಸಹಕಾರ ಅವಶ್ಯಕ ,ಬೆಲವಂತರ ಶ್ರೀ ಚೆನ್ನವೃಷಭೇಂದ್ರ ಮಠವು ಮುಂದಿನ ದಿನಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಮಾಡುವಂತಹಾಗಲಿ ಎಂದರು,ಹುಲ್ಲಂಬಿ ಸಿದ್ಧಾರೂಢ ಮಠದ ಶ್ರೀ ರಾಜೇಶ್ವರ ಸ್ವಾಮಿಗಳು, ತಾವರಗೇರಿಯ ಕಾಯಕಯೋಗಿ ಶ್ರೀ ಬಸವ ಶಾಸ್ತ್ರಿಗಳು, ಶ್ರೀ ಶರಣಪ್ಪ ಶಾಸ್ತ್ರಿಗಳು,ಬೆಣಚಿಯ ಶ್ರೀ ರವಿ ಶಾಸ್ತ್ರಿಗಳು, ಶಿವಶರಣೆ ಮಂಜುಳಾ ಬಸಪ್ಪ ಕೌಲಗೆರಿ, ಕರ್ನಾಟಕ ಸಂಗ್ರಾಮ ಸೇನೆಯ ತಾಲೂಕ ಅಧ್ಯಕ್ಷ ಸಾತಪ್ಪ ಕುಂಕೂರ. ಕಲಘಟಗಿ ತಾಲೂಕಿನ ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡ ಪೂಜಾರ , ಕುಬೇರಗೌಡ ಮುರಳ್ಳಿ,ಬೈಲಪ್ಪ ಕೌಲಗೇರಿ,ಮಂಜುನಾಥ ಬಸನಕೊಪ್ಪ, ಕವಿತಾ ಕೌಲಗೇರಿ,ಪ್ರಭುಲಿಂಗ ರಂಗಾಪುರ, ಬಸಪ್ಪ ಕೌಲಗೇರಿ ಸೇರಿದಂತೆ ನಾಡಿನ ವಿವಿಧ ಭಾಗಗಳ ಅಪಾರ ಪ್ರಮಾಣದ ಭಕ್ತರು ಇದ್ದರು, ಮಾಣಿಕ್ಯ ವೃಷಭೇಂದ್ರ ಮಹಾಸ್ವಾಮಿಗಳಿಗೆ ಇದೇ ಸಂದರ್ಭದಲ್ಲಿ ಕಿರೀಟ ಪೂಜೆ ನೆರವೇರಿಸಲಾಯಿತು, ನಂತರ ಮಹಾ ಮಂಗಳೋತ್ಸವ ಹಾಗೂ ಇದೇ ಸಂದರ್ಭದಲ್ಲಿ ಸೇರಿದ ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು,






