ಜನ್ಮದಿನ ಅಂಗವಾಗಿ ಸಸಿ ನೆಟ್ಟು,ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಜಿ ಇ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಕರ್ನಾಟಕ ಸಂಗ್ರಾಮ ಸೇನೆಯ ತಾಲೂಕು ಘಟಕ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಹಾಗು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಾಗು ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮನ್ನು ವೈವಿಧ್ಯಮಯ,ಅರ್ಥ ಪೂರ್ಣವಾಗಿ ಆಚರಿಸಲಾಯಿತು, ಅರಣ್ಯ ಇಲಾಖೆ ಅಧಿಕಾರಿಗಳಾದ ಅರುಣ ಕುಮಾರ ಅಷ್ಟಗಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರತಿ ವರ್ಷ ಕರ್ನಾಟಕ ಸಂಗ್ರಾಮ ಸೇನೆಯವರು ಪರಿಸರ ದಿನಾಚರಣೆ ಅಂಗವಾಗಿ ವನ ಮಹೋತ್ಸವ ಕಾರ್ಯಕ್ರಮ ಮಾಡುವುದು ತಾಲೂಕಿನಲ್ಲಿ ಪರಿಸರ ಬೆಳೆಸುವಲ್ಲಿ ನಿರಂತರ ಪರಿಶ್ರಮದ ವಿಷಯವಾಗಿದೆ ಎಂದರು, ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಹಸೀಲ್ದಾರ ಬಸವರಾಜ ಹೊಂಕಣದವರ ಮಾತನಾಡಿ ವಿದ್ಯಾರ್ಥಿಗಳು ತಂದೆ ತಾಯಿ ಗುರುವಿನ ಮೇಲೆ ನಂಬಿಕೆ ಇಟ್ಟು ಅವರ ಮಾರ್ಗದಲ್ಲಿ ನಡೆದು ಜೀವನದಲ್ಲಿ ಯಶಸ್ವಿಗಳಾಗಿರಿ , ಪ್ರತಿ ವರ್ಷ ತಾಲೂಕಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು, ಸಾನಿಧ್ಯ ವಹಿಸಿ ಜಾನಪದ ವಿದ್ವಾಂಸರಾದ ಎಂ ಆರ್ ತೋಟಗಂಟಿ ಮಾತನಾಡಿ ಕುಂಕೂರ ಅವರು ಪ್ರತಿ ವರ್ಷ ತಾಲೂಕಿನ ಮಕ್ಕಳಿಗೆ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು ,ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸೋಮಲಿಂಗ ಒಡೆಯರ ರಂಗಭೂಮಿ ಸಂಭಾಷಣೆಗಳನ್ನು ಹೇಳುವುದರ ಮೂಲಕ ಯಲ್ಲರಿಗೂ ದೇಶಪ್ರೇಮ ಹಾಗೂ ನಾಡಪ್ರೇಮವನ್ನು ಜಾಗೃತಿ ಮೂಡಿಸಿದರು,ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಎಚ ಎನ ಸುಣಗದ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ದಾಸರಾಗದೆ ಒಳ್ಳೆಯ ಸಂಸ್ಕೃತಿ ಕಲಿತು ಬೆಳವಣಿಗೆ ಹೊಂದುವ ಜೊತೆಗೆ ಉತ್ತಮ ಸಮಾಜದ ಅಭಿವೃದ್ಧಿಗೆ ಶ್ರಮಿಸಿ ಎಂದರು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಾಯಿತ್ರಿದೇವಿ ಸಜ್ಜನ ಮಾತನಾಡಿ ಪ್ರಸ್ತುತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಪ್ರತಿ ವರ್ಷ ಮಾಡುವುದು ತಾಲೂಕಿಗೆ ಒಳ್ಳೆಯ ಕೀರ್ತಿ ತರುವ ವಿಷಯವಾಗಿರುತ್ತದೆ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿರಲಿ ಎಂದರು,ವಿಸ್ತಾರ ನ್ಯೂಸ್ ಉಪಸಂಪಾದಕರಾದ ಪರಶುರಾಮ ತಹಶೀಲ್ದಾರ ಮಾತನಾಡಿ ಸಾತಪ್ಪ ಕುಂಕುರವರು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬವನ್ನು ಮೋಜು ಮಸ್ತಿ ಮಾಡದೆ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಪರಿಸರ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಭಾಗಿಯಾಗೋಣ ಎಂದರು ,ಸಂಗುರ ಶುಗರ ಫ್ಯಾಕ್ಟರಿಯ ನಿರ್ದೇಶಕರಾದ ಮಾಂತೇಶ ತಹಶೀಲ್ದಾರ ಮಾತನಾಡಿ ತಾಲೂಕಿನಲ್ಲಿ ಸಾಕಷ್ಟು ವಿವಿಧ ಸಂಘಟನೆಗಳಿದ್ದು ಆದರೆ ಸಂಗ್ರಾಂಸೇನೆ ಅರ್ಥಪೂರ್ಣ ಕಾರ್ಯ ಚಟುವಟಿಕೆ ಮೂಲಕ ತಾಲೂಕಿನಲ್ಲಿ ಉತ್ತಮ ಕಾರ್ಯವನ್ನು ಹಮ್ಮಿಕೊಂಡು ತಾಲೂಕಿನ ಜನಸಾಮಾನ್ಯರಿಗೆ, ರೈತರಿಗೆ ಅನ್ಯಾಯವಾದಾಗ ದ್ವನಿಯಾಗಿ ನಿಲ್ಲುವುದೇ ಕರ್ನಾಟಕ ಸಂಗ್ರಾಮ ಸಂಗ್ರಾಮ ಸೇನೆ ಎಂದರು, ಪತ್ರಕರ್ತೆ ಕುಮಾರಿ ಮಂಜುಳಾ ಕೌಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಸಂಗ್ರಾಮ ಸೇನೆ ತಾಲೂಕಿನ ಜನರಿಗೆ ಒಂದು ಶಕ್ತಿ ಇದ್ದ ಹಾಗೆ ಎಷ್ಟೋ ಸಮಸ್ಯೆಗಳು ಬಂದರೂ ಎದುರಿಸುತ್ತಾ ,ತಾಲೂಕಿನ ಜನರಿಗೆ ನ್ಯಾಯ ಕೊಡಿಸುವಲ್ಲಿ ಕರ್ನಾಟಕ ಸಂಗ್ರಾಮ ಸೇನೆಯ ಎಲ್ಲ ಕಾರ್ಯಕರ್ತರು ಮುಂದೆ ನಿಲ್ಲುತ್ತಾರೆ , ಅನೇಕ ಅರ್ಥಪೂರ್ಣ ಕಾರ್ಯ ಚಟುವಟಿಕೆ ಮೂಲಕ ತಾಲೂಕಿನಲ್ಲಿ ಸಾಕಷ್ಟು ರೈತಪರ ಹೋರಾಟ ಹಾಗೂ ಚಕ್ಕಡಿ ಚಳುವಳಿಯನ್ನು ಮಾಡುತ್ತ ,ಕರ್ನಾಟಕ ಸಂಗ್ರಾಮ ಸೇನೆ ಉತ್ತಮ ಸೇವೆ ನೀಡುತ್ತಿದೆ ಎಂದರು, ಶಾಸ್ತ್ರಿಯ ಸಂಗೀತದ ವಿದುಷಿ ಶ್ರೀಮತಿ ಪದ್ಮಾಕ್ಷಿ ಒಡೆಯರ ಪ್ರಾರ್ಥನ ಗೀತೆ ಹಾಡಿದರು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಂದ್ರಶೇಖರ ಬೀ,ಪ್ರಕಾಶ ಕುಂಬಾರ, ಮಂಜುನಾಥ ಮುಳಗುಂದ, ಮುಖ್ಯಸ್ಥರಾದ ಬಸನಗೌಡ ಪಾಟೀಲ, ಪ್ರಾಂಶುಪಾಲರಾದ ಶಾರದಾ ಹಾದಿಮನಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಭುಲಿಂಗ ರಂಗಾಪುರ, ಪತ್ರಕರ್ತರಾದ ಉಮೇಶ ಜೋಶಿ,ಬಸಪ್ಪ ಕೌಲಗೇರಿ,ಶೈಲಜಾ ನಾಯಕ, ಸುಭಾಷ್ ಕಂಪ್ಲಿಕೊಪ್ಪ ,ಎಲ್ಲಪ್ಪ ಕಂಪ್ಲಿಕೊಪ್ಪ , ಸೌಮ್ಯ ನಾಯಕಿ,ಶರೀಫ ಬಗಡಗೆರಿ ,ರಾಮು ಲಮಾಣಿ, ಮಾಬೂಬಿ ರಾಮಾಪುರ, ರತ್ನ ಬಡಿಗೇರ , ರವಿ ಬಡಿಗೇರ, ಶಂಕರ ರೆಡ್ಡೆರ, ಶಂಕರಗುರು ರಬಕವಿ, ಮಂಜುನಾಥ ಬೋವಿ ,ಮಾರುತಿ ಲಮಾಣಿ , ಬಸವರಾಜ ಬೇಗೂರ ಶೆಟ್ಟರ ಹನುಮಂತ ಪಾಚಂಗಿ, ಸೊಗರಾ ಅಗಸರ, ಪ್ರಿಯಾ ಬಾಗಾಯಿ, ಶರಣಪ್ಪ ಉಣಕಲ್ಲ ಸೇರಿದಂತೆ ಕರ್ನಾಟಕ ಸಂಗ್ರಾಮ ಸೇನೆಯ ಕಾರ್ಯಕರ್ತರು,ಸಂಗಿತಗಾರರು,ಕಲಾವಿದರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು,ಪತ್ರಕರ್ತರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿಧ್ದರು ,

Leave a Reply

Your email address will not be published. Required fields are marked *