ಕಲಘಟಗಿ ಪಟ್ಟಣ ಪಂಚಾಯತದಲ್ಲಿ SIR ಕುರಿತು ಉದ್ಘಾಟನೆ ಹಾಗೂ ಜಾಥಾ ಕಾರ್ಯಕ್ರಮ ಕುರಿತು

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ದಿನಾಂಕ 29-06-2026 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಲಘಟಗಿ ಪಟ್ಟಣ ಪಂಚಾಯತ ಕಚೇರಿಯಲ್ಲಿ SIR ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಬದಲ್ಲಿ ಲಘಟಗಿ ತಾಲೂಕಾ SVEEP ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಪಿ ವೈ ಸಾವಂತ, ತಾಲೂಕಾ ತಹಶಿಲ್ದಾರರು ದಂಡಾಧಿಕಾರಿಗಳಾದ ಬಸವರಾಜ ಹೊಂಕಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ಸಜ್ಜನ, ಮುಖ್ಯಾಧಿಕಾರಿಗಳಾದ ಚಂದ್ರೇಖರ ಬಿ. ಭಾಗವಹಿಸುವರು

ಜಿ ಇ ಪ.ಪೂ ಕಾಲೇಜ ಕಲಘಟಗಿಯ , ಪ್ರಾಚಾರ್ಯರು, ಉಪನ್ಯಾಸಕರು ಮತ್ತು 200 ವಿದ್ಯಾರ್ಥಿಗಳು ಪಟ್ಟಣ ಪಂಚಾಯತ ಕಚೇರಿಯ ಸರ್ವ ಸಿಬ್ಬಂದಿಗಳು ಹಾಗೂ ಬಿಎಲ್ ಓ ಗಳು ಹಾಜರಾಗುವರು,

ನಂತರ 2 ರೂಟ ಮೂಲಕ ಕಲಘಡಗಿ ಪಟ್ಡಣದ ಪ್ರಮುಖ ಬೀದಿಗಳಲ್ಲಿ ದ್ವನಿವರ್ದಕದ ಮೂಲಕ SIR ಘೋಷಣೆಗಳನ್ನು ಹೇಳುತ್ತಾ ಜಾಥಾ ಮಾಡುವುದು

ರೂಟ್-1
ಪಟ್ಟಣ ಪಂಚಾಯತ ಕಚೇರಿಯಿಂದ- ಅಪ್ಪಾಬಟ್ ಕ್ರಾಸ- ಛಾವಡಿ ಕ್ರಾಸ- ಚಿತ್ರಗಾರ ಓಣಿ- ಮಿಠಾಯಿಗಾರ ಓಣಿಯ‌ ಮೂಲಕ ಕೆರೆ ಓಣಿಯಲ್ಲಿ ಹಾದೂ ಗ್ರಾಮದೇವಿ ಗುಡಿಯ ರಸ್ತೆಯ ಮೂಲಕ ಹಳಿಯಾಳ ರಸ್ತೆಯ ಪಟ್ಟಣ ಪಂಚಾಯತ ಸಮುದಾಯ ಭವನದ ಮೂಲಕ ಹಳೆ ಕೋರ್ಟ ರಸ್ತೆಯ ಮೂಲಕ ಜಿ ಇ ಕಾಲೇಜ ತಲುಪುವುದು

ರೂಟ್ -2
ಪಟ್ಟಣ ಪಂಚಾಯತ ಕಚೇರಿಯಿಂದ ಹಳಿಯಾಳ ರಸ್ತೆಯ ಮೂಲಕ ಹನುಮಾನ್ ಸರ್ಕಲ್‌ ಮೂಲಕ ತಾಲೂಕ ಪಂಚಾಯತ ಮುಂದೆ ಹಾದು ನಾಲಬಂಧ ಓಣಿ ಕುಂಬಾರ ಓಣಿಯ ಶ್ರೀ ಬಸವೇಶ್ವರ ಕಲ್ಯಾಣ‌ ಮಂಟಪದ ಮುಂದೆ ಹಾದು ಮಾರ್ಕೆಟ್ ರೋಡ ಅಕ್ಕಿ ಓಣಿಯ ಚೌತಮನಿ ಕಟ್ಟೆಯ ಮೂಲಕ ಕೆಸಿಸಿ ಬ್ಯಾಂಕ್ ಮೂಲಕ ಮಚಗಾರ ಓಣಿ ಬಮ್ಮಿಗಟ್ಟಿ ಕ್ರಾಸ್‌ ಮೂಲಕ ಹುಬ್ಬಳ್ಳಿ-ಕಾರವಾರ ರಸ್ತೆಯ‌ ಮೂಲಕ ಪಾಲ್ಕರ ಪ್ಲಾಟಿನಲ್ಲಿ ಹಾದು ಹಳೆ ಕೋರ್ಟ ರಸ್ತೆಯ ಮೂಲಕ ಜಿ ಇ ಕಾಲೇಜು ತಲಪುವುದು.

Leave a Reply

Your email address will not be published. Required fields are marked *