ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರವಲಯದ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಕುರಿತು ವ್ಯಕ್ತಿ ವಿಕಸನ, ಜೀವನ ಕೌಶಲ್ಯ, ನೈತಿಕ ಮೌಲ್ಯಗಳು ಹಾಗೂ ಮೊಬೈಲ್ ಬಳಕೆಯ ಕುರಿತು ವಿಶೇಷ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಫಾದರ್ ದೀಪಕ್ ಜೋಸೆಫ್,ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು , ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ರೆಬ್ರ ವರ್ಗೀಸ್ ಕೆಜಿ, ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡರ ಎನ್ಎಸ್ಎಸ್ ಸಂಯೋಜನ ಅಧಿಕಾರಿ ಜಾಫರ್ ಭಾವನವರ, ಶಂಕರ ಹೊನ್ನಳ್ಳಿ ನಿರೂಪಿಸಿದರು, ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೆತರ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು,




