ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಪಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಜಾನಪದ ಸಂಭ್ರಮ 2026 ರನ್ನು ಧಾರವಾಡ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಗುರುವಾರ ಸಸಿಗೆ ನೀರೆರೆದು ,ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಯುವ ಮುಖಂಡ ಕೃಷ್ಣ ಕೊಳ್ಳಾನಟ್ಟಿ , ಯುವ ಧುರೀಣ ಈಶ್ವರ ಶಿವಳ್ಳಿ , ರಂಗಭೂಮಿ ಕಲಾವಿದ ಸೋಮಲಿಂಗ ಒಡೆಯರ, ಸಮಾಜ ಸೇವಕಿ ಮಂಜುಳಾ ಕೌಲಗೇರಿ, ಸಂಘಟಕ ಪ್ರಭುಲಿಂಗ ರಂಗಾಪುರ, ಜಾನಪದ ವಿದ್ವಾಂಸ , ಸಂಘದ ಅಧ್ಯಕ್ಷ ಯಕ್ಕೆರಪ್ಪ ನಡುವಿಮನಿ, ಕಲಾವಿದ ಜೋಸೆಫ ಮಲ್ನಾಡಿ ಸೇರಿದಂತೆ ನಾಡಿನ ವಿವಿಧ ಕಲಾತಂಡಗಳು ,ಸಂಗೀತಗಾರರು ,ಕಲಾವಿದರು ,ಸಾಹಿತಿಗಳು ,ಪತ್ರಕರ್ತರು ಆಗಮಿಸಿ ತಮ್ಮ ಕಲೆ ಪ್ರದರ್ಶಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,


